೧. ಹೆಚ್ಚು ಗುಣಮಟ್ಟದ ಪೀಠೋಪಕರಣಗಳನ್ನು ಮರು ಉಪಯೋಗಿಸಬಹುದು. ಆದರೆ ಅದನ್ನು ಉಪಯೋಗಿಸುವ ಮೊದಲು, ಚೆನ್ನಾಗಿ ಸ್ವಚ್ಚಗೊಳಿಸಿ, ತೊಳೆದು ಸೋಂಕು ರಹಿತ ಸಿಂಪಡಿಕೆಯನ್ನು ಬಳಸಿ, ನಂತರ ಸೂರ್ಯ ಬೆಳಕು ಇಲ್ಲದಿರುವ ಕಡೆ ಅದನ್ನು ಒಣಗಿಸಿ ನಂತರ ಉಪಯೋಗಿಸತಕ್ಕದ್ದು. ಸೂರ್ಯ ಕಿರಣಗಳು ಅದರ ಮೇಲೆ ಬಿದ್ದಲ್ಲಿ ಅಂತಹ ಪೀಠೋಪಕರಣಗಳಲ್ಲಿ ಬಳಸಿದ ಮರದ ಹಲಗೆಗಳಲ್ಲಿ ಬಿರುಕು ಬರುವ ಸಾಧ್ಯತೆ ಹೆಚ್ಚು.
೨. ಧರಿಸುವ ಬಟ್ಟೆಗಳನ್ನು ಮರು ಉಪಯೋಗಿಸಬಹುದು ಆದರೆ ಅದಕ್ಕೂ ಮುನ್ನ ಅದಕ್ಕೆ ಅಂಟಿರುವ ಕೊಳೆಯನ್ನು ಚೆನ್ನಾಗಿ ತಿಕ್ಕಿ ತೊಳೆದು, ಅನೇಕ ಸಲ ಸೋಪಿನ ಪೌಡರ್ ಬಳಸಿ ಒಗೆದು ನಂತರ ಧರಿಸಬಹುದು.