Personal Hygiene
ಪರ್ಸನಲ್ ಹೈಜೀನ್ (ವ್ಯಯಕ್ತಿಕ ನೈರ್ಮಲ್ಯ) ಕೈ ತೊಳೆಯುವುದು:
ತುರ್ತುಪರಿಸ್ಥಿತಿಯಲ್ಲಿ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಕೀಟಾಣುಗಳು ಹರಡುವುದನ್ನು ತಡೆಯುತ್ತದೆ. ನಲ್ಲಿ ನೀರು ಉಪಯೋಗಿಸಲು ಆಗದಿದ್ದಲ್ಲಿ, ಕಾದಾರಿಸಿದ ಅಥವಾ ಡಿಸಿಂಫೆಕ್ಟ್ ಮಾಡಿರುವ ನೀರಿನಿಂದ, ಸೋಪ್ ಹಚ್ಚಿ ಕೈ ತೊಳೆಯಿರಿ. ಕೈ ಸರಿಯಾಗಿ ತೊಳೆಯುವುದಕ್ಕೆ ಈ ಕ್ರಮವನ್ನು ಅನುಸರಿಸಿ.
- ಕೈಯನ್ನು ಸ್ವಚ್ಛ, ಹರಿಯುವ, ಬೆಚ್ಚಗಿರುವ ಅಥವಾ ತಣ್ಣಗಿರುವ ನೀರಿನಡಿ ಸಾಬೂನು ಹಚ್ಚಿ ಕೈ ತೊಳೆಯಿರಿ.
- ಕೈಗಳನ್ನು ಒಂದಕ್ಕೊಂದು ಉಜ್ಜಿ ನೊರೆ ಬರಸಿಕೊಳ್ಳಿ. ಕೈ ಕೆಳಗೆ, ಮೇಲೆ, ಬೆರಳುಗಳ ಮಧ್ಯ, ಉಗುರುಗಳ ಕೆಳಗೆ ಉಜ್ಜಿರಿ.
- ಕೈಗಳನ್ನು ಇಪ್ಪತ್ತು ಸೆಕೆಂಡುಗಳ ಕಾಲ ಉಜ್ಜುತ್ತಿರಬೇಕು. ಹ್ಯಾಪಿ ಬರ್ತಡೇ ಹಾಡನ್ನು ಮೊದಲಿನಿಂದ ಕೊನೆಯವರೆಗೂ ಎರಡು ಬಾರಿ ಹಾಡುವಷ್ಟು ಸಮಯ ಉಜ್ಜಿಕೊಳ್ಳಿ.
- ಹರಿಯುವ ನೀರಿನಡಿ ಕೈಗಳನ್ನು ಚನ್ನಾಗಿ ತೊಳೆದುಕೊಳ್ಳಿ
- ಸ್ವಚ್ಛವಾದ ಟವಲಿನಿಂದ ಅಥವಾ ಗಾಳಿಯಲ್ಲಿ ಕಯ್ಯಾಡಿಸಿ ಕೈಗಳನ್ನು ಚನ್ನಾಗಿ ಒಣಗಿಸಿಕೊಳ್ಳಿ
- ಕೈಯಲ್ಲಿರುವ ಕೀಟಾಣುಗಳು ಹೋಗಬೇಕೆಂದರೆ ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳುವುದೇ ಅತ್ಯಂತ ಉತ್ತಮ ಮಾರ್ಗ.
- ಸೋಪು ಮತ್ತು ನೀರು ಸಿಗದಿದ್ದಲ್ಲಿ ೬೦% ಆಲ್ಕೋಹಾಲ್ ಇರುವಂತಹ "ಸ್ಯಾನಿಟೈಜರ್" ಉಪಯೋಗಿಸಿ. ಆಲ್ಕೋಹಾಲ್ ಇರುವ ಸ್ಯಾನಿಟೈಜರ್ ಗಳು ಕೈಯಲ್ಲಿರುವ ಕೀಟಾಣುಗಳ ಸಂಖ್ಯೆಯನ್ನು ಬಹಳ ಬೇಗ ಕಡಿಮೆ ಮಾಡುತ್ತದಾದರೂ ಇವು ಎಲ್ಲ ಬಗೆಯ ಕೀಟಾಣುಗಳನ್ನು ಹೋಗಿಸುವುದಿಲ್ಲ. ಕಣ್ಣಿಗೆ ಕಾಣುವಂತೆ ಕೈ ಕೊಳಕಾಗಿದ್ದರೆ ಸ್ಯಾನಿಟೈಜರ್ ಗಳು ಪರಿಣಾಮಕಾರಿ ಆಗಿರುವುದಿಲ್ಲ.
ಕೈಗಳನ್ನು ಯಾವಾಗ ತೊಳೆಯಬೇಕು?
ಕೈಗಳನ್ನು ಸ್ವಚ್ಛವಾದ ಹರಿಯುವ ನೀರಿನಲ್ಲಿ (ಸಿಗುವಂತಿದ್ದರೆ) ತೊಳೆದುಕೊಳ್ಳಿ:
- ಅಡಿಗೆ ಮಾಡುವುದರ ಮುಂಚೆ, ಮಾಡುತ್ತಿರುವಾಗ, ಮತ್ತು ಮಾಡಿದ ನಂತರ.
- ತಿನ್ನುವ ಮುಂಚೆ
- ಶೌಚಾಲಯ ಉಪಯೋಗಿಸಿದ ನಂತರ
- ಮಗುವಿನ ಡಯಾಪರ್ ಬದಲಾಯಿಸಿದ ನಂತರ ಅಥವಾ ಮಗು ಶೌಚಾಲಯಕ್ಕೆ ಹೋಗಿ ಬಂದಮೇಲೆ ಅದನ್ನು ಸ್ವಚ್ಛಗೊಳಿಸಿದ ನಂತರ.
- ರೋಗಿಗಳನ್ನು ನೋಡಿಕೊಳ್ಳುವ ಮುಂಚೆ, ಹಾಗೂ ನಂತರ.
- ಮೂಗನ್ನು ಒರಿಸಿಕೊಂಡ ಮೇಲೆ, ಕೆಮ್ಮಿದ ನಂತರ ಮತ್ತು ಸೀನಿದ ನಂತರ.
- ಪ್ರಾಣಿಗಳನ್ನು ಅಥವಾ ಅವುಗಳ ಮಲಮೂತ್ರವನ್ನು ಮುಟ್ಟಿದ ನಂತರ
- ಕಸದ ತಿಪ್ಪೆಯನ್ನು ಮುಟ್ಟಿದ ನಂತರ
- ಗಾಯಕ್ಕೆ ಚಿಕಿತ್ಸೆ ಮಾಡುವ ಮುಂಚೆ ಮತ್ತು ನಂತರ.
ಸ್ನಾನ
ಪ್ರವಾಹದ ನಂತರ ಸ್ವಚ್ಛವಾದ, ಸುರಕ್ಷಿತವಾದ ನೀರಿನಿಂದ ಸ್ನಾನ ಮಾಡಬೇಕು. ಕೆಲವು ವೇಳೆ ಕುಡಿಯಲು ಸುರಕ್ಷಿತವಾಗಿರದ ನೀರಿನಿಂದ ಸ್ನಾನ ಮಾಡಬಹುದು, ಆದರೆ ಅದು ಬಾಯಿ ಅಥವಾ ಕಣ್ಣುಗಳ ಒಳಗೆ ಹೋಗದಿರುವಂತೆ ನೋಡಿಕೊಳ್ಳಿ
ಹಲ್ಲುಗಳ ನೈರ್ಮಲ್ಯ (ಡೆಂಟಲ್ ಹೈಜೀನ್)
ಹಲ್ಲುಗಳನ್ನು ಸ್ವಚ್ಛ ಹಾಗೂ ಸುರಕ್ಷಿತವಾದ ನೀರಿನಿಂದ ಮಾತ್ರ ಉಜ್ಜಬೇಕು. ನಲ್ಲಿಯ ನೀರು ಉಪಯೋಗಿಸಲು ಯೋಗ್ಯವೇ ಎಂದು ಸ್ಥಳೀಯ ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಿ
ಗಾಯಗಳ ಚಿಕಿತ್ಸೆ
ತುರ್ತು ಸಂದರ್ಭಗಳಲ್ಲಿ ಗಾಯಗಳನ್ನು ಸ್ವಚ್ಛವಾಗಿ ಹಾಗೂ ಮುಚ್ಚಿ ಇಟ್ಟಿರಬೇಕು. ಗಾಯಗಳಿಗೆ ಮತ್ತು ಗುಳ್ಳೆಗಳಿಗೆ ಪ್ರವಾಹದ ನೀರು ತಗುಲಿದರೆ ಸೋಂಕು ಉಂಟಾಗುತ್ತದೆ.
ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು:
- ತೆರೆದ ಗಾಯವಿದ್ದರೆ ಪ್ರವಾಹದ ನೀರು ತಗಲದಂತೆ ನೋಡಿಕೊಳ್ಳಿ
- ತೆರೆದ ಗಾಯಗಳನ್ನು ನೀರು ಹೀರದಂಥ (ವಾಟರ್ಪ್ರೂಫ್) ಬ್ಯಾಂಡೇಜುಗಳಿಂದ ಸುತ್ತಿ ಸೋಂಕು ಉಂಟಾಗದಂತೆ ನೋಡಿಕೊಳ್ಳಿ
- ತೆರೆದ ಗಾಯಗಳನ್ನು ಸೋಪು ಹಾಗೂ ಸ್ವಚ್ಛ ನೀರಿನಿಂದ ತೊಳೆದು ಶುಭ್ರವಾಗಿ ಇಟ್ಟುಕೊಳ್ಳಿ
- ಗಾಯ ಕೆಂಪಾದರೆ, ಅಥವಾ ಊದಿಕೊಂಡರೆ, ಅಥವಾ ಸೋರಿದರೆ ಕೂಡಲೇ ವ್ಯದ್ಯಕೀಯ ನೆರವನ್ನು ಪಡೆಯಿರಿ
- "ವಿಬ್ರಿಯೋ" ಎನ್ನುವವು ಕೆಲವು ಸಮುದ್ರ ತೀರಗಳಲ್ಲಿ ನೈಸರ್ಗಿಕವಾಗಿ ಕಾಣಸಿಗುವ ಕೀಟಾಣುಗಳು. (ಬ್ಯಾಕ್ಟೀರಿಯಾ). ತೆರೆದ ಗಾಯಗಳಿಗೆ ಉಪ್ಪುನೀರು ತಗುಲಿದರೆ ಅಥವಾ ಪ್ರವಾಹದ ಸಂದರ್ಭದಲ್ಲಿಸಾಧಾರಣ ನೀರಿಗೆ ಉಪ್ಪು ಸೇರಿದಾಗ, ಇವು ಚರ್ಮಕ್ಕೆ ಸೋಂಕು ಉಂಟುಮಾಡುತ್ತವೆ.
ಪ್ರವಾಹ ಹಾಗೂ ಇತರ ಪ್ರಕೃತಿ ವಿಪತ್ತುಗಳ ನಂತರ ಗಾಯಗಳು ಉಂಟಾಗುವ ಸಾಧ್ಯತೆ ಹೆಚ್ಚು. ಕೂಡಲೇ ಪ್ರಥಮ ಚಿಕಿತ್ಸೆ ನೀಡಿದರೆ ಸಣ್ಣ ಸಣ್ಣ ಗಾಯಗಳು ಬೇಗ ವಾಸಿಯಾಗಿ ಸೋಂಕು ಉಂಟಾಗುವುದು ತಪ್ಪಿಸಬಹುದು. ಪ್ರಥಮ ಚಿಕಿತ್ಸೆ ನೀಡುವ ಮುಂಚೆ ಮತ್ತು ನಂತರ ಸೋಪು ಹಚ್ಚಿ ಕೈ ತೊಳೆದರೆ ಸೋಂಕು ಉಂಟಾಗುವುದು ತಪ್ಪಿಸಬಹುದು.
ಸೋಪು ಮತ್ತು ನೀರು ಸಿಗದೇ ಇದ್ದರೆ ೬೦% ಆಲ್ಕೋಹಾಲ್ ಇರುವ ಸ್ಯಾನಿಟೈಜರ್ ಉಪಯೋಗಿಸಿ. ತೆರೆದ ಗಾಯಗಳಿದ್ದರೆ ಟೆಟನಸ್, ಮತ್ತು ಇತರ ಬ್ಯಾಕ್ಟೀರಿಯಾ ಮತ್ತು ಫಂಗಸ್ ಸೋಂಕು ತಗಲಬಹುದು.
ಕೆಳಕಂಡ ಪರಿಸ್ಥಿತಿಗಳಲ್ಲಿ ಶೀಘ್ರ ವ್ಯದ್ಯಕೀಯ ಚಿಕಿತ್ಸೆ ಪಡೆಯಿರಿ:
- ಮಣ್ಣು, ಮರದ ತುಂಡು, ಲೋಹ ಇತರ ಹೊರಗಿನ ಪದಾರ್ಥಗಳು ಗಾಯದೊಳಗೆ ಸಿಕ್ಕಿಕೊಂಡಿದ್ದರೆ
- ಗಾಯಕ್ಕೆ ವಿಶೇಷ ಸೋಂಕು ಉಂಟಾಗುವ ಸಾಧ್ಯತೆ ಇದ್ದರೆ (ಉದಾಹಾರಣೆಗೆ ಕೊಳಕು ಪದಾರ್ಥದಿಂದ ಗಾಯವುಂಟಾಗಿದ್ದರೆ) - ಹಳೆಯ ಗಾಯ ಸೋಂಕು ಉಂಟಾಗುತ್ತಿರುವ ಗುರುತು ಕಂಡುಬಂದರೆ (ನೋವು ಹೆಚ್ಚಾದರೆ, ಊದಿದರೆ, ಕೆಂಪಕ್ಕೆ ತಿರುಗಿದರೆ, ಸೋರಿದರೆ, ಅಥವಾ ಜ್ವರ ಬಂದರೆ.)
Bathing
Bathing or showering after a flood should only be done with clean, safe water. Sometimes water that is not safe to drink can be used for bathing, but be careful not to swallow any water or get it in your eyes.
Dental Hygiene
Brushing your teeth after a water-related emergency should only be done with clean, safe water. Listen to local authorities to find out if tap water is safe to use.
Wound Care
Keeping wounds clean and covered is crucial during an emergency. Open wounds and rashes exposed to flood waters can become infected. To protect yourself and your family:
Avoid contact with flood waters if you have an open wound.
Cover clean, open wounds with a waterproof bandage to reduce chance of infection.
Keep open wounds as clean as possible by washing well with soap and clean water.
If a wound develops redness, swelling, or oozing, seek immediate medical care.
Vibrios are naturally occurring bacteria that live in certain coastal waters. They can cause a skin infection when an open wound is exposed to salt water or a mix of salt and fresh water, which can occur during floods.
The risk for injury during and after a flood and other natural disasters is high. Prompt first aid can help heal small wounds and prevent infection. Wash your hands with soap and water before and after providing first aid for a wound to help prevent infection. Use an alcohol-based hand sanitizer that contains at least 60% if soap and water are not available. Tetanus, other bacterial infections, and fungal infections are potential health threats for persons who have open wounds.
Seek medical attention as soon as possible if:
There is a foreign object (soil, wood, metal, or other objects) embedded in the wound;
The wound is at special risk of infection (such as a puncture by a dirty object)
An old wound shows signs of becoming infected (increased pain and soreness, swelling, redness, draining, or you develop a fever).
Last updated